Karnataka news paper

ಗುಂಡು ಹಾರಿಸಿಕೊಂಡು ಯಲಹಂಕದ ಕ್ಷೇತ್ರ ಶಿಕ್ಷಣಾಧಿಕಾರಿ ಆತ್ಮಹತ್ಯೆ !


ಹೈಲೈಟ್ಸ್‌:

  • ಯಲಹಂಕದ ಕ್ಷೇತ್ರ ಶಿಕ್ಷಣಾಧಿಕಾರಿ ಆತ್ಮಹತ್ಯೆ
  • 25 ಸಾವಿರಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿದ್ದೇನೆ
  • ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಸಾವು

ಯಲಹಂಕ: ಅನಾರೋಗ್ಯದಿಂದ ಬಳಲುತ್ತಿದ್ದ ಯಲಹಂಕದ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಓ) ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಬಿಇಓ ಕಮಲಾಕರ್‌(50) ಆತ್ಮಹತ್ಯೆಗೆ ಶರಣಾದವರು. ಕೊಡಿಗೇಹಳ್ಳಿ ಎನ್‌ಟಿಐ ಕಾಲೊನಿಯಲ್ಲಿ ವಾಸವಾಗಿದ್ದ ಅವರು ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿದ್ದರು. ಡೆತ್‌ನೋಟ್‌ ಬರೆದಿಟ್ಟು ಭಾನುವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕಮಲಾಕರ್‌ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಕೊಡಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿಯ ಟೆಂಕಬೈಲಿನ ಕಮಲಾಕರ್‌, ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿ 2 ವರ್ಷ ಹಾಗೂ ಬೆಂಗಳೂರು ನಗರ ಜಿಲ್ಲೆಯ ನಿರ್ದೇಶಕರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದು, ನಾಲ್ಕು ವರ್ಷಗಳಿಂದ ಯಲಹಂಕದಲ್ಲಿ ಬಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಪೊಲೀಸರು ತನಿಖೆ ಕೈಕೊಂಡಿದ್ದಾರೆ.

ಸುರತ್ಕಲ್‌ ಎನ್‌ಐಟಿಕೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

ಡೆತ್‌ ನೋಟ್‌ನಲ್ಲಿ ಏನಿದೆ ?
ಆತ್ಮಹತ್ಯೆಗೂ ಮುನ್ನ ಕಮಲಾಕರ್‌ ಡೈರಿಯಲ್ಲಿ ಡೆತ್‌ ನೋಟ್‌ ಬರೆದಿಟ್ಟಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಪತ್ತೆಯಾಗಿದೆ. ‘ಅನಾರೋಗ್ಯದ ಸಮಸ್ಯೆ ಸಾಕಷ್ಟು ಕಾಡುತ್ತಿತ್ತು. ಇದುವರೆಗೆ 25 ಸಾವಿರಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಎನ್ನಿಸಿ ಬಿಟ್ಟಿದೆ.

ನನ್ನ ಕುಟುಂಬದವರು ಇಲ್ಲಿಯವರೆಗೆ ನೋಡಿಕೊಂಡಿರುವುದು ನನ್ನ ಅದೃಷ್ಟ. ಆದರೆ, ಅವರಿಗೆ ಇನ್ನೂ ಹೆಚ್ಚು ನೋವು ಕೊಡಲು ಇಷ್ಟ ಇಲ್ಲ. ನಮ್ಮ ಮನೆಯವರು ಬಹಳ ಒಳ್ಳೆಯವರು. ಇನ್ನು ಮುಂದೆ ನನ್ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್‌ ನೋಟ್‌ನಲ್ಲಿ ಕಮಲಾಕರ್‌ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ತಾಣಗಳಾದ ರಾಮನಗರದ ಅರಣ್ಯಗಳು..! ಅರಣ್ಯ ಇಲಾಖೆಗೆ ತಲೆನೋವಾದ ವಿದ್ಯಮಾನ..



Read more