Source : Online Desk
ಬ್ರಿಸ್ಬೇನ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ಆಶಸ್ ಮೊದಲ ಟೆಸ್ಟ್ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಆಡುವ ವೇಳೆ ಮೈದಾನದ ಹೊರಗೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
ಈ ವೇಳೆ ಆತನ ಪ್ರೀತಿಯನ್ನು ಇಂಗ್ಲೆಂಡ್ ನ ಗೆಳತಿ ಒಪ್ಪಿಕೊಂಡಿಳು. ಇದಾದ ಬಳಿಕ, ಪ್ರೀತಿಯ ಜ್ಞಾಪಕವಾಗಿ ಹುಡುಗಿ ಉಂಗುರ ತೊಟ್ಟಿರುವುದನ್ನು ಕಾಣಬಹುದು.
She said yes! How good! pic.twitter.com/Mc7erNaeYO
— 7Cricket (@7Cricket) December 10, 2021
ಈ ಕುತೂಹಲಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಕ್ರಿಕೆಟ್ ಮೈದಾನದ ದೊಡ್ಡ ಪರದೆಯ ಮೇಲೆ ನೇರ ಪ್ರಸಾರಗೊಂಡಿತು. ಈ ವೇಳೆ ಗ್ರೌಂಡ್ ನಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳು ನಟಾಲಿಯಾ ಹಾಗೂ ರಾಬ್ ಜೋಡಿಗೆ ಚಪ್ಪಾಳೆ ತಟ್ಟಿ ಇಬ್ಬರನ್ನು ಅಭಿನಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಪಂದ್ಯದ ವೇಳೆ ಇದೊಂದು ಉತ್ತಮ ಕ್ಷಣವಾಗಿತ್ತು ಅಂತಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.
Feeling the love @Holly_Ferling catches up with Rob & Nat, the newly engaged couple! pic.twitter.com/CkNvFnETbO
— 7Cricket (@7Cricket) December 10, 2021