ಹೈಲೈಟ್ಸ್:
- ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ
- ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ
- ಮತ ಕೇಳುವ ವಿಚಾರವಾಗಿ ಪರಸ್ಪರ ಗಲಾಟೆ
ಜೆಡಿಎಸ್ ನ ಯಲ್ಲಪ್ಪ, ಕಾಂಗ್ರೆಸ್ ನ ನಾಗಣ್ಣ ನಡುವೆ ಮತ ಕೇಳುವ ವಿಚಾರವಾಗಿ ಪರಸ್ಪರ ಗಲಾಟೆ ನಡೆದಿದ್ದು ಹೊಡೆದಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಂದು ಕಡೆ ಕೂಡ ಇದೇ ರೀತಿಯ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಗಲಾಟೆ ನಡೆದ ಮತಗಟ್ಟೆಯನ್ನು ಅತಿಸೂಕ್ಷ್ಮ ಮತಗಟ್ಟೆ ಆಂತ ಘೋಷಣೆ ಮಾಡಿದ್ದರೂ ಸಹ ಕೇವಲ ಇಬ್ಬರು ಪೊಲೀಸ್ ಪೇದೆಯನ್ನು ಮಾತ್ರ ನಿಯೋಜಿಸಲಾಗಿದೆ.
ಕವಿತಾಳ ಪಟ್ಟಣದಲ್ಲೂ ಮಾರಾಮಾರಿ!
ಇನ್ನು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲೂ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.ಇಲ್ಲಿನ 3ನೇ ವಾರ್ಡ್ ಮತಗಟ್ಟೆ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮತಯಾಚನೆ ಮಾಡ್ತಿದ್ದರು. ಮತಗಟ್ಟೆ ಬಳಿಯೇ ಮತಯಾಚನೆ ವಿಚಾರವಾಗಿ ಶುರುವಾದ ವಾಗ್ವಾದ ಜಗಳಕ್ಕೆ ಇಳಿದು ಹಲ್ಲೆ ನಡೆದಿದೆ.
ಅಂಕೋಲಾದಲ್ಲಿ ಪ್ರವಾಸಿ ಪೊಲೀಸರಿಂದ ಟೋಲ್ ಗೇಟ್ ನಲ್ಲಿ ಗಲಾಟೆ; ಠಾಣೆಯಲ್ಲಿ ಪ್ರಕರಣ ಇತ್ಯರ್ಥ!
ಮಧ್ಯಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದು ಮತದಾನ ಶುರುವಾಗಿದ್ದು, ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್‌ಗಳಲ್ಲಿಂದು ವೋಟಿಂಗ್ ನಡೆಯುತ್ತಿದೆ.