Karnataka news paper

ಪ್ರಿಯಕರನ ಜತೆ ಕ್ರಿಸ್‌ಮಸ್ ಆಚರಿಸಿದ ಅಮೀರ್ ಖಾನ್ ಪುತ್ರಿ ಇರಾ


ಬೆಂಗಳೂರು: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್, ಪ್ರಿಯಕರ ನೂಪುರ್ ಶಿಖರೆ ಜತೆ ಕ್ರಿಸ್‌ಮಸ್ ಆಚರಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇರಾ ಅವರು ಪ್ರಿಯಕರ ನೂಪುರ್ ಜತೆಗಿರುವ ಮತ್ತು ಹಬ್ಬದ ಸಂಭ್ರಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಇರಾ ಮತ್ತು ನೂಪುರ್ ಜತೆಗೆ ಅಮೀರ್ ಖಾನ್ ಕೂಡ ಸೇರಿಕೊಂಡಿದ್ದರು.

ಅಮೀರ್ ಖಾನ್ ಮೊದಲ ಹೆಂಡತಿ ರೀನಾ ದತ್ತಾ ಅವರ ಮಗಳಾಗಿರುವ ಇರಾ ಖಾನ್ ಹಾಗೂ ಫಿಟ್ನೆಸ್ ತರಬೇತುದಾರರಾಗಿರುವ ನೂಪುರ್ ಬಹುದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.

ಇರಾ ಖಾನ್ ಅವರು 2019ರಲ್ಲಿ ಮೀಡಿಯಾ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.

ನೂಪುರ್ ಮತ್ತು ಇರಾ ಇಬ್ಬರೂ ಪರಸ್ಪರ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಫೋಟೊ–ವಿಡಿಯೊ ಹಂಚಿಕೊಳ್ಳುತ್ತಾ, ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾರೆ.





Read More…Source link