Karnataka news paper

ಸೋಮವಾರ ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆದ ಈ ಸಣ್ಣ ಪುಟ್ಟ ಷೇರುಗಳನ್ನು ಗಮನಿಸಿ!


ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಿಎಸ್‌ಇ ಸೆನ್ಸೆಕ್ಸ್ 57,103.69ರ ಮಟ್ಟದಲ್ಲಿ ಫ್ಲಾಟ್‌ (ಏರಿಕೆ ಇಳಿಕೆ ಇಲ್ಲದೆ) ಆಗಿ ವಹಿವಾಟು ನಡೆಸುತ್ತಿದೆ. ನಿಫ್ಟಿ 50 ಸಹ 16,993.50ರ ಮಟ್ಟದಲ್ಲಿ ಸ್ಥಿರವಾಗಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕವು 179 ಪಾಯಿಂಟ್ ನಷ್ಟದೊಂದಿಗೆ ಕಳಪೆ ವಹಿವಾಟು ನಡೆಸುತ್ತಿದ್ದು, 34,678.60ರ ಮಟ್ಟದಲ್ಲಿದೆ.

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಸನ್ ಫಾರ್ಮಾ ಮತ್ತು ಎಲ್ & ಟಿ ಷೇರುಗಳು ಇಂದಿನ ವಹಿವಾಟಿನಲ್ಲಿ ಲಾಭ ಗಳಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ 24,323.65ರ ಮಟ್ಟದಲ್ಲಿದೆ. ಟೊರೆಂಟ್ ಫಾರ್ಮಾಸ್ಯುಟಿಕಲ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ನ್ಯಾಟ್ಕೊ ಫಾರ್ಮಾ ಮತ್ತು ಅಜಂತಾ ಫಾರ್ಮಾ ಷೇರುಗಳು ಇಂದಿನ ವಹಿವಾಟಿನಲ್ಲಿ ಗಳಿಕೆ ದಾಖಲಿಸಿವೆ. ಇದೇ ಬಗೆಯಲ್ಲಿ ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು 28,443.92ರ ಮಟ್ಟದಲ್ಲಿ ಫ್ಲಾಟ್ ಟ್ರೇಡಿಂಗ್ ನಡೆಸಿದೆ. ಕಾಬ್ರಾ ಎಕ್ಸ್‌ಟ್ರೂಷನ್‌ ಟೆಕ್ನಿಕ್, ಕಿಂಗ್‌ಫಾ ಸೈನ್ಸ್ ಅಂಡ್ ಟೆಕ್ನಾಲಜೀಸ್ ಮತ್ತು ಕೀರ್ತಿ ಇಂಡಸ್ಟ್ರೀಸ್ ಷೇರುಗಳು ಶೇ. 10ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.

ನಿಫ್ಟಿ 50ರಲ್ಲಿ ಹಸಿರು ವಲಯ (ಗಳಿಕೆ) ವಹಿವಾಟು ನಡೆಸುತ್ತಿರುವ ಷೇರುಗಳೆಂದರೆ ಟೆಕ್ ಮಹೀಂದ್ರಾ, ಸಿಪ್ಲಾ, ಸನ್ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಡಾ. ರೆಡ್ಡಿಸ್ ಲ್ಯಾಬೊರೇಟರಿ. ಇಂಡಸ್‌ಇಂಡ್ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಏಷ್ಯನ್ ಪೇಂಟ್ಸ್ ಮತ್ತು ಒಎನ್‌ಜಿಸಿ ಷೇರುಗಳು ನಷ್ಟ ಕಂಡಿವೆ.

ಸೋಮವಾರ ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿರುವ ಪೆನ್ನಿ ಸ್ಟಾಕ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಮುಂಬರುವ ಸೆಷನ್‌ಗಳಿಗಾಗಿ ಈ ಕೌಂಟರ್‌ಗಳನ್ನು ಗಮನಿಸಿ.

ಕ್ರಮ ಸಂಖ್ಯೆಷೇರಿನ ಹೆಸರುಎಲ್‌ಟಿಪಿಪ್ರೈಸ್‌ ಗೇಯ್ನ್‌ (%)
1ಎಂಪಿಎಸ್‌ ಇನ್ಫೋಟೆಕ್ನಿಕ್ಸ್‌0.5011.11
2ಎಫ್‌ಸಿಎಸ್‌ ಸಾಫ್ಟ್‌ವೇರ್‌4.053.85
3ಸುಝ್ಲಾನ್‌ ಎನರ್ಜಿ8.504.94
4ಬಲ್ಲಾರ್‌ಪುರ್‌ ಇಂಡಸ್ಟ್ರೀಸ್‌2.204.76
5ಗ್ಯಾಮನ್‌ ಇನ್ಫ್ರಾ22.56

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…