Karnataka news paper

ಜನರ ರಕ್ಷಣೆ ಸರ್ಕಾರದ ಕರ್ತವ್ಯ; ಈ ನಿಟ್ಟಿನಲ್ಲಿ ಕ್ರಮ ಅನಿವಾರ್ಯ! ಕೆ. ಸುಧಾಕರ್


ಹೈಲೈಟ್ಸ್‌:

  • ಜನರ ರಕ್ಷಣೆ ಸರ್ಕಾರದ ಕರ್ತವ್ಯ
  • ಈ ನಿಟ್ಟಿಲ್ಲಿ ಕ್ರಮ ಅನಿವಾರ್ಯ
  • ಆರೋಗ್ಯ ಸಚಿವ ಡಾ. ಕೆ ಸುಧಾಕರ್‌

ಬೆಂಗಳೂರು: ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲವು ಕ್ರಮ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂಗೆ ವ್ಯಕ್ತವಾಗುತ್ತಿರುವ ವಿರೋಧ ಕುರಿತಾಗಿ ಈ ರೀತಿ ಪ್ರತಿಕ್ರಿಯೆ ನೀಡಿದರು.

ನೈಟ್ ಕರ್ಫ್ಯೂ ಮೂಲಕ ನಿತ್ಯದ ಚಟುವಟಿಕೆ ನಿಷೇಧ ಮಾಡುವುದರಿಂದ ಯಾರಿಗೂ ಸಂತೋಷ ತರುವುದಿಲ್ಲ. ಚಟುವಟಿಕೆ ನಿಷೇಧ ಮಾಡುವುದು ಮೂಲಕ ಜನರ ಒಲಿತಿಗಾಗಿ ಅಷ್ಟೇ. ತಾಂತ್ರಿತ ಸಲಹಾ ಸಮಿತಿ ವರದಿ ಮೇರೆ ಕೆಲವು ಕ್ರಮ ಅಗತ್ಯವಾಗಿದೆ. ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಕ್ರಮ ಅನಿವಾರ್ಯ ಎಂದರು.

ನೈಟ್‌ ಕರ್ಫ್ಯೂ: ಸರ್ಕಾರದ ಆದೇಶಕ್ಕೆ ವ್ಯಕ್ತವಾಗುತ್ತಿದೆ ವಿರೋಧ!

ನೈಟ್ ಕರ್ಪ್ಯೂ ಹತ್ತು ದಿನಗಳ ಕಾಲ ಇದೆ. ಹತ್ತು ದಿನಗಳ ಕಾಲ ಸ್ಥಿತಿ ಗತಿ ನೋಡಿ ಮುಂದಿನ ನಿರ್ಧಾರ ಮಾಡಲಾಗುವುದು. ಓಮಿಕ್ರಾನ್ ಪ್ರಕರಣಗಳು ವಿದೇಶದಲ್ಲಿ ಹೆಚ್ಚಾಗಿ ಹರಡುತ್ತಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಬೇಕು ಎಂದರು.

ಬೊಮ್ಮಾಯಿ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ದಿ ಮತ್ತಷ್ಟು ಹೆಚ್ಚಾಗಲಿದೆ. ಮೂಲಭೂತ ಸೌಕರ್ಯ, ರೈತ. ವಿದ್ಯಾರ್ಥಿಗಳ ಭವಿಷ್ಯ, ನಿರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಬೊಮ್ಮಾಯಿ ಬಂದ ಬಳಿಕ ಹೊಸ ಅಭಿವೃದ್ಧಿ ಪರ್ವ ಆರಂಭವಾಗಿದೆ. ಅದು ಇನ್ನಷ್ಟು ಗಟ್ಟಿಯಾಗಲಿದೆ. ನಮ್ಮ ಅಭಿವದ್ದಿ, ಆಡಳಿತದ ಪರಿ ನೋಡಿ ವಿಪಕ್ಷಗಳು ಕೂಡಾ ಹತಾಶರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಈ ಕುರಿತಾಗಿ ಕ್ಯಾಪ್ಟನ್ ನಿರ್ಧಾರ ಮಾಡುತ್ತಾರೆ ಎಂದರು.



Read more