Karnataka news paper

ಮನೆಯಲ್ಲಿ ಮಕ್ಕಳಿಗೆ ಸನಾತನ ಧರ್ಮ ಸಂಸ್ಕಾರದ ಅರಿವು ಮೂಡಿಸುವ ಅಗತ್ಯವಿದೆ; ಪೇಜಾವರ ಶ್ರೀ


ಪುತ್ತೂರು: ಮನೆಯಲ್ಲಿ ಮಕ್ಕಳಿಗೆ ಸನಾತನ ಧರ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಗ ಮಾತ್ರ ನಮ್ಮ ಆಚರಣೆಗಳು ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿ ಹೇಳಿದರು.

ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಬದುಕಿನ ಪಾಠ ಹೇಳುವ ಅಗತ್ಯ ಇದೆ. ದುಡ್ಡಿನ ಮೋಹದಿಂದ ನೆಮ್ಮದಿ ಸಿಗದು. ಹಾಗಾಗಿ ಸುಖ, ಸಂತೋಷ ಸಿಗಬೇಕಾದರೆ ದೇವರ ಉಪಾಸನೆಯ ಅಗತ್ಯವಿದೆ ಎಂದರು.
ವರ್ಷಾಂತ್ಯದಲ್ಲಿ ಮೈಸೂರು ಅರಮನೆ ಆವರಣದಲ್ಲಿ ಗಮನ ಸೆಳೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ..!
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಕೃತಿಯೇ ದೇವರು ಎಂದು ಪೂಜಿಸುವ ಮೂಲಕ ತುಳುನಾಡು ದೈವ-ದೇವರ ಆಚರಣೆಯಲ್ಲಿ ವೈಶಿಷ್ಯ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿಕೊಂಡು ಶ್ರದ್ಧಾ ಕೇಂದ್ರಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಭಕ್ತ ಸಮೂಹವನ್ನು ಧಾರ್ಮಿಕತೆಯತ್ತ ಕೊಂಡೊಯ್ಯಲು ಸಾಧ್ಯ ಎಂದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೆ.ಎಸ್‌. ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಿದ ಎಲ್ಲರಿಗೂ ಮಹಿಷಮರ್ದಿನಿ ಒಳಿತು ಉಂಟು ಮಾಡುತ್ತಾಳೆ. ಅಭೂತಪೂರ್ವ ರೀತಿಯಲ್ಲಿ ಬೆಂಬಲಿಸಿದ ಭಕ್ತ ವೃಂದಕ್ಕೆ ಧನ್ಯವಾದ ಎಂದರು.
ಶ್ರೇಷ್ಠವಾದ ಸನಾತನ ಧರ್ಮವನ್ನು ಬಿಟ್ಟು ಹೋಗಬೇಡಿ: ಸುಬ್ರಹ್ಮಣ್ಯ ಶ್ರೀ
ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ, ಉದ್ಯಮಿ ಸುಬ್ರಹ್ಮಣ್ಯ ರೈ ಕೆ.ಎಸ್‌. ಮೈಸೂರು, ಉದ್ಯಮಿ ರಾಜ್‌ಕುಮಾರ್‌ ರೈ, ನ್ಯಾಯವಾದಿ ಎಸ್‌. ರಾಜಶೇಖರ್‌, ಈಶ್ವರಮಂಗಲ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ.ವಿ., ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಸಂಚಾಲಕ ಗಂಗಾಧರ ಶೆಟ್ಟಿ ಮಠಂತಬೆಟ್ಟು, ನಟಿ ಚೈತ್ರಾ ರೈ, ಜಲಸಂಪನ್ಮೂಲ ಇಲಾಖೆಯ ಎಇ ಮೋಹನ್‌ ದಾಸ್‌, ಶ್ರೀ ಮಹಾಲಿಂಗೇಶ್ವರ ದೇವಾಲಯದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶನಿವಾರ ಬೆಳಗ್ಗೆ 9.30ಕ್ಕೆ ಮೂಕಾಂಬಿಕಾ ಕಲ್ಟರಲ್‌ ಅಕಾಡೆಮಿಯವರಿಂದ ನಾಟ್ಯಲೋಕ, ಮಧ್ಯಾಹ್ನ 12ಕ್ಕೆ ಪುರುಷರಕಟ್ಟೆ ಗುರುಕುಲ ಕಲಾಕೇಂದ್ರ ತಂಡದಿಂದ ನೃತ್ಯಗಾನ ಸಂಭ್ರಮ, 1.30ಕ್ಕೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಮಂಡಳಿ ಬೊಳುವಾರು ಅವರಿಂದ ತಾಳಮದ್ದಳೆ ‘ಶಾಂಭವಿ ವಿಜಯ’, ಸಂಜೆ 3.30ಕ್ಕೆ ಜಿಲ್ಲೆಯ ಆಯ್ದ ಪ್ರಖ್ಯಾತ ನೃತ್ಯ ತಂಡದವರಿಂದ ಸಾಂಸ್ಕೃತಿಕ ಸ್ಪರ್ಧೆ, ಸಂಜೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8 ರಿಂದ ಕಲಶ ವೈಭವ ನಡೆಯಿತು.



Read more