Karnataka news paper

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಲ್ಲು ಭಾಯ್: ಅಭಿಮಾನಿಗಳು, ಸೆಲೆಬ್ರಿಟಿಗಳ ಶುಭಾಶಯ


ಬೆಂಗಳೂರು: ಬಾಲಿವುಡ್ ನಟ ಮತ್ತು ಉದ್ಯಮಿ ಸಲ್ಮಾನ್ ಖಾನ್ ಸೋಮವಾರ, ಡಿಸೆಂಬರ್ 27ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ನಟ, ನಿರ್ಮಾಪಕ, ಟಿವಿ ಕಾರ್ಯಕ್ರಮ ನಿರೂಪಕ ಮತ್ತು ಉದ್ಯಮಿ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್, 1965ರ ಡಿಸೆಂಬರ್ 27ರಂದು ಮಧ್ಯ ಪ್ರದೇಶದ ಇಂಧೋರ್‌ನಲ್ಲಿ ಜನಿಸಿದರು.

1988ರಿಂದ ಸಲ್ಮಾನ್ ಖಾನ್, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವಿವಾಹಿತರಾಗಿರುವ ಅವರು, ಹಲವು ನಟಿಯರ ಜತೆ ಡೇಟಿಂಗ್ ಮೂಲಕವೂ ಸುದ್ದಿಯಾಗಿದ್ದರು.

ಸಲ್ಮಾನ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ಹಲವರು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ.

‘ಬೀಯಿಂಗ್ ಹ್ಯೂಮನ್‘ ಎಂಬ ಚಾರಿಟಿ ಸಂಸ್ಥೆಯನ್ನು ಕೂಡ ಸಲ್ಮಾನ್ ಮುನ್ನಡೆಸುತ್ತಿದ್ದು, ಅದೇ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಕೂಡ ಹೊಂದಿದ್ದಾರೆ.



Read More…Source link