ಮಹಾಂತೇಶ ಹಕ್ಕರಕಿ ಅಣ್ಣಿಗೇರಿ
ಅಕಾಲಿಕ ಮಳೆಗೆ ಅಪಾರ ಪ್ರಮಾಣದ ತರಕಾರಿ ಬೆಳೆ ಹಾನಿಗೀಡಾಗಿದ್ದು, ನಿರೀಕ್ಷೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಆಮದು ಆಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಿದ್ದು, ಗ್ರಾಹಕರ ಜೇಬು ಭಾರವಾಗುತ್ತಿದೆ. ಬೆಲೆ ಏರಿಕೆ ಕಂಡರೂ ಇದರ ಲಾಭ ರೈತರಿಗೆ ಮಾತ್ರ ಸಿಗುತ್ತಿಲ್ಲ.
ಈ ಹಿಂದೆ ಆಲೂಗಡ್ಡೆ ಕೆಜಿಗೆ 20 ರೂ. ಇದ್ದದ್ದು 40 ರೂ., ಬೀನ್ಸ್ ದರ ಕೆಜಿಗೆ 70 ರಿಂದ 90 ರೂ., ಈರುಳ್ಳಿ 20 ರಿಂದ 50 ರೂ. ಕೆಜಿಗೆ ಮಾರಾಟ ಮಾಡಲಾಗುತ್ತಿದೆ.
ಶತಕ ಭಾರಿಸಿದ ಟೊಮೆಟೊ
ಮಾರುಕಟ್ಟೆಯಲ್ಲಿ ಈ ಹಿಂದೆ ಕೆಜಿಗೆ 10ರಿಂದ 15 ರೂ. ಇದ್ದ ಟೊಮೆಟೊ ಬೆಲೆ ಈಗ 80 ರಿಂದ 100 ರೂ. ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಟೊಮೆಟೊ ಬೆಲೆ ಕೇಳಿಯೇ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಏರಿದ ಸೊಪ್ಪು ದರ
ಕೊತ್ತಂಬರಿ 2 ಕಂತೆಗೆ 10 ರೂ., ಮೆಂತೆ 8 ರೂ., ಪುದೀನಾ 5 ರೂ., ಕರಿಬೇವು 2 ರೂ.ಗೆ ಕೊಡುತ್ತಿದ್ದವರು ಈಗ 5,10 ರೂ. ಎನ್ನುತ್ತಿದ್ದಾರೆ. ಕೆಲ ಭಾಗದಲ್ಲಿ ಬೆಳದಂತಹ ಸೊಪ್ಪು ಬೆಲೆ ದುಬಾರಿಯಾದ ಕಾರಣ ಗದಗ-ಹುಬ್ಬಳ್ಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ ವರ್ತಕ ಅಹ್ಮದ ಕಾಗದ.
ಜಮೀನಿನಲ್ಲೇ ಕೊಳೆತ ತರೇವಾರಿ ಬೆಳೆ
ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆದು ಆದಾಯ ಗಳಿಸಲು ನಿರೀಕ್ಷೆಯಲ್ಲಿದ್ದರು. ಆದರೆ ಈ ಭಾರಿ ನಿರೀಕ್ಷೆಗೂ ಮೀರಿ ಮಳೆಯಾದ ಹಿನ್ನೆಲೆ ಜಮೀನಿನಲ್ಲಿಯೇ ಬೆಳೆ ಕೊಳೆಯುತ್ತಿದೆ. ಅಲ್ಲದೇ ತಾಲೂಕಿನ ನಾನಾ ಹಳ್ಳಿಗಳಿಂದ ತರಕಾರಿ ಮಾರಾಟಕ್ಕೆ ಬರುತ್ತಿದ್ದ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದು ಪರೋಕ್ಷವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.

ತರಕಾರಿ ಬೆಲೆ ಕೇಳಿದ್ರ ತೆಲಿ ತಿರಗತೈತ್ರಿ. ಮೊದ್ಲ100 ರೂ. ಒಯ್ಯದ್ರ ಚೀಲಾ ತುಂಬಾ ತರಕಾರಿ ಬರ್ತಿತ್ತು. ಈಗ 500 ರೂ. ಒಯ್ಯದ್ರೂ ಚೀಲ ತುಂಬವಲ್ದ. ಹಿಂಗ್ ರೇಟ್ ಆದ್ರ ನಮ್ಮಂತ ಬಡವರ ಪರಿಸ್ಥಿತಿ ಹೇಂಗ್ರೀ..
ಸುಲೋಚನಮ್ಮ ಜನವಾರಿ, ಗ್ರಾಹಕಿ
ಪ್ರತಿನಿತ್ಯ ಬೆಳಗಿನ ಜಾವ ಆಟೊ ತಗೊಂಡು ಬಾಡಿಗಿ ಕೊಟ್ಟು ಗದಗಿನ ಮಾರ್ಕೆಟ್‌ಗೆ ಹೊದ್ರ ಒಂದು ಬಾಕ್ಸ್ ಟೊಮೆಟೊ ಬೆಲೆ 1300 ರಿಂದ 1400 ಆದ್ರ ನಾವು ತಂದ ಮಾರಿ ಲಾಭ ತಕ್ಕೋಳುದಾದ್ರೂ ಹೆಂಗ? ಅದ್ರಾಗ 5-6 ಕೆಜಿ ಕೆಟ್ರ ಲಾಭದ ರೊಕ್ಕ ಲುಕ್ಷಾತ್ರ್ಯನ್ಯಾಗ ಹೊದಂಗ ಐತಿ.
ರಾಜು ಭೋವಿ, ವ್ಯಾಪಾರಸ್ಥ
ತರಕಾರಿ ಹಿಂದಿನ ದರ (ಕೆಜಿಗೆ)- ಈಗಿನ ದರ (ಕೆಜಿಗೆ)
- ಟೊಮೆಟೊ 10-15ರೂ.- 80-100 ರೂ.
- ಈರುಳ್ಳಿ 20-25 ರೂ. -30-50ರೂ.
- ಹಿರೇಕಾಯಿ 30-40ರೂ. -50-60ರೂ.
- ಮೆಣಸಿನಕಾಯಿ 20-30ರೂ. -60-70ರೂ.
- ಚವಳೆಕಾಯಿ 20-30ರೂ. -40-50ರೂ.
- ಬದನೆಕಾಯಿ 20-30ರೂ. -50-60ರೂ.
- ಬೀನ್ಸ್ 30-40ರೂ.- 70-80ರೂ.
- ಕ್ಯಾಬೇಜ್ 20-25ರೂ.- 50-60ರೂ.
- ಆಲೂಗಡ್ಡೆ 10-20ರೂ. -30-40ರೂ.
- ಹಾಗಲಕಾಯಿ 30-40ರೂ. -40-60ರೂ.