ಹೈಲೈಟ್ಸ್:
- ಬ್ಯಾಂಕ್ ಠೇವಣಿ ವಿಮೆ ಕುರಿತು ಪ್ರಧಾನಿ ಮೋದಿ ಮಾತು
- ಠೇವಣಿ ವಿಮೆಯು ಠೇವಣಿದಾರರ ಎಲ್ಲ ವಿಧದ ಠೇವಣಿಗಳನ್ನೂ ಒಳಗೊಳ್ಳಲಿದೆ
- ಬ್ಯಾಂಕ್ ಠೇವಣಿ ಇನ್ಷೂರೆನ್ಸ್ ಕವರ್ ಅನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ
ಠೇವಣಿ ವಿಮೆಯು ಠೇವಣಿದಾರರ ಎಲ್ಲ ಠೇವಣಿಗಳಾದ ಉಳಿತಾಯ, ನಿಶ್ಚಿತ, ಚಾಲ್ತಿ, ರೆಕರಿಂಗ್ ಡೆಪಾಸಿಟ್ಸ್ ಇವೆಲ್ಲವನ್ನೂ ಕವರ್ ಮಾಡುತ್ತದೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವಾಣಿಜ್ಯ ಬ್ಯಾಂಕುಗಳು ಹೊಸ ವಿಮಾ ನೀತಿಗೆ ಒಳಗೊಳ್ಳುತ್ತವೆ. ಅಷ್ಟೇ ಅಲ್ಲದೆ, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಕೋ-ಆಪರೇಟಿವ್ ಬ್ಯಾಂಕುಗಳು ಕೂಡ ಇದರ ವ್ಯಾಪ್ತಿಗೆ ಸೇರುತ್ತವೆ. ಪ್ರಮುಖ ಸುಧಾರಣೆ ಕ್ರಮದಲ್ಲಿ ಬ್ಯಾಂಕ್ ಠೇವಣಿ ಇನ್ಷೂರೆನ್ಸ್ ಕವರ್ ಅನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. 1 ಲಕ್ಷದಷ್ಟು ಠೇವಣಿದಾರರು ತಮ್ಮ ಕ್ಲೇಮ್ಗೆ ರೂ. 1300 ಕೋಟಿ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವರಾದ ಭಾಗ್ವತ್ ಕೆ. ಕರಡ್ ಮತ್ತು ಆರ್ಬಿಐ ಗವರ್ನರ್ ಆದ ಶಕ್ತಿಕಾಂತ ದಾಸ್ ಭಾಗಿಯಾಗಲಿದ್ದಾರೆ.
ಠೇವಣಿ ಇನ್ಷೂರೆನ್ಸ್ ಕವರೇಜ್ ಪ್ರತಿ ಬ್ಯಾಂಕ್ನ ಪ್ರತಿ ಠೇವಣಿದಾರರಿಗೆ 5 ಲಕ್ಷ ರೂಪಾಯಿ ಆಗುತ್ತದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಶೇ 98.1ರಷ್ಟು ಖಾತೆಗಳಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದ ಬೆಂಚ್ಮಾರ್ಕ್ ಇದರಲ್ಲಿ ಶೇ 80ರಷ್ಟು ಇದೆ. ಈಚೆಗಷ್ಟೇ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಈಚೆಗೆ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಆರ್ಬಿಐ ಅಡಿಯಲ್ಲಿ ಬರುವ 16 ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಗಳ ಠೇವಣಿದಾರರು ಪಡೆದುಕೊಂಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಣ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಕಾಯ್ದೆಗೆ ತಿದ್ದುಪಡಿಯಿಂದ ಡಿಪಾಸಿಟ್ ಹಣ ಹಿಂಪಡೆಯುವುದಕ್ಕೆ ಅವಕಾಶ, ವಿಮಾ ವ್ಯಾಪ್ತಿಯ ಮಿತಿಯಲ್ಲಿ ಹಣ ಹಿಂಪಡೆಯಲು ಅವಕಾಶ ಸಿಗುತ್ತದೆ. ಈ ಕಾಯ್ದೆಗೆ ಒಳಪಡುವ ಫಲಾನುಭವಿಗಳ (Depositors) ಜೊತೆಗೆ (ಇಂದು ಭಾನುವಾರ ಡಿಸೆಂಬರ್ 12 ರಂದು) ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂವಾದ ನಡೆಸಲಿದ್ದಾರೆ.
ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಫಲಾನುಭವಿಗಳ ಜೊತೆಗೆ ಪ್ರಧಾನಿ ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 11 ರಿಂದ 12 ಗಂಟೆ ಸುಮಾರಿಗೆ ಫಲಾನುಭವಿಗಳ (Deposit Insurance) ಜೊತೆಗೆ ಸಂವಾದ ಕಾರ್ಯಕ್ರಮ (Bank Deposit Insurance Programme) ನಡೆಯಲಿದೆ.
ವಿಜಯಪುರದ ಬ್ಯಾಂಕ್ ಜತೆಗೂ ಸಂವಾದ
ಪ್ರಧಾನಿ ಜೊತೆಗೆ ಇಂದು ನಡೆಯಲಿರೋ ಸಂವಾದದಲ್ಲಿ ರಾಜ್ಯದ 4 ಬ್ಯಾಂಕ್‌ಗಳ ಫಲಾನುಭವಿಗಳು ಚರ್ಚೆ ನಡೆಸಲಿದ್ದಾರೆ. ರಾಜ್ಯದ ನಾಲ್ಕು ಬ್ಯಾಂಕಗಳ ಪೈಕಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿನ ದಿ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಡೆಪಾಸಿಟ್ ಇನ್ಸೂರೆನ್ಸ್ ಫಲಾನುಭವಿಗಳು ಭಾಗಿಯಾಗುತ್ತಿದ್ದಾರೆ. ನಗರದ ಕಂದಗಲ್ ಹನುಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.