
ಹರಕ್ ಸಿಂಗ್ ರಾವತ್
ಡೆಹ್ರಾಡೂನ್: ಉತ್ತರಾಖಂಡದ ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆಗೆ ನಿರ್ಧರಿಸಿರುವ ವಿಚಾರ ಬಿಜೆಪಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ‘ಬಿಜೆಪಿ ಮತ್ತು ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ’: ಪಕ್ಷದ ನಿಧಿಗೆ ಪ್ರಧಾನಿ ಮೋದಿ 1000 ರೂ. ದೇಣಿಗೆ!
ಹರಕ್ ಸಿಂಗ್ ರಾವತ್ ತಮ್ಮ ನಿರ್ಣಯದಂತೆ ರಾಜೀನಾಮೆ ನೀಡಿದರೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಚಿಂತಕರ ಚಾವಡಿ’ ಪರಿಷತ್ ಈಗ ‘ಉಳ್ಳವರ ಮನೆ’; ಮೇಲ್ಮನೆ ಘನತೆ, ಪಾವಿತ್ರ್ಯತೆ ಕಳೆದುಹೋಗುತ್ತಿದೆ: ರಘು ಆಚಾರ್
ಮೂಲಗಳ ಪ್ರಕಾರ, ಅರಣ್ಯ, ಪರಿಸರ, ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನು ಹೊಂದಿರುವ ರಾವತ್ ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತಮ್ಮ ಕ್ಷೇತ್ರವಾದ ಕೋಟ್ ದ್ವಾರದಲ್ಲಿ ಪ್ರಸ್ತಾವಿತ ವೈದ್ಯಕೀಯ ಕಾಲೇಜು ಕುರಿತು ರಾಜ್ಯ ಸರ್ಕಾರ ನಿಷ್ಕಾಳಜಿ ತೋರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೊರನಡೆದಿದ್ದರು.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲು ನಿರ್ಗಮನ, ಸಿ ಟಿ ರವಿ ಆಗಮನ?: ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ?