Source : Online Desk
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕ, ಅಕ್ಸರ್ ಪಟೇಲ್ ಸಮಯೋಚಿತ ಅರ್ಧಶತಗಳ ನೆರವಿನ ಹೊರತಾಗಿಯೂ 325 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಈ ಪತನದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ರ ಅಬ್ಬರದ ಬೌಲಿಂಗ್ ಇತ್ತು. ಪಟೇಲ್ ಕೇವಲ 119 ರನ್ ನೀಡಿ ಭಾರತ ಎಲ್ಲ 10 ವಿಕೆಟ್ ಗಳನ್ನು ಕಬಳಿಸಿದರು. ಆ ಮೂಲಕ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: 2ನೇ ಟೆಸ್ಟ್, ಮೊದಲ ಇನ್ನಿಂಗ್ಸ್: ನ್ಯೂಜಿಲ್ಯಾಂಡ್ ವಿರುದ್ಧ ಮಾಯಾಂಕ್ ಭರ್ಜರಿ ಶತಕ; ದಿನದಾಟದಂತ್ಯಕ್ಕೆ ಭಾರತ 221/4
ಈ ಹಿಂದೆ ಇದೇ ರೀತಿಯ ಸಾಧನೆಯನ್ನು ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲೇಕರ್ (ಜೇಮ್ಸ್ ಚಾರ್ಲ್ಸ್ ಲೇಕರ್) ಮತ್ತು ಭಾರತದ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಮಾಡಿದ್ದರು. ಆ ಬಳಿಕ ಈ ಪಟ್ಟಿಗೆ ಸೇರಿದ ಮೂರನೇ ಬೌಲರ್ ಎಂಬ ಕೀರ್ತಿಗೆ ಎಜಾಜ್ ಪಟೇಲ್ ಭಾಜನರಾಗಿದ್ದಾರೆ.
ಇದನ್ನೂ ಓದಿ: 2ನೇ ಟೆಸ್ಟ್, ಮೊದಲ ದಿನ: ಶೂನ್ಯ ಸುತ್ತಿದ ಕೊಹ್ಲಿ, ಪೂಜಾರ; ಭಾರತ 3 ವಿಕೆಟ್ ನಷ್ಟಕ್ಕೆ 80 ರನ್! ಇಲ್ಲಿದೆ ಸ್ಕೋರ್ ವಿವರ
ಕುಂಬ್ಳೆ ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 1999ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆ ಬಳಿಕ ಬರೊಬ್ಬರಿ 22 ವರ್ಷಗಳ ಬಳಿಕ ನ್ಯೂಜಿಲೆಂಡ್ ಎಜಾಜ್ ಪಟೇಲ್ ಈ ಸಾಧನೆ ಮಾಡಿದ್ದಾರೆ.