
ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್
ಬೆಂಗಳೂರು: ನಗರದ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಅನ್ನು ಇತ್ತೀಚಿಗಷ್ಟೇ ಸೌತ್ ವೆಸ್ಟರ್ನ್ ರೈಲ್ವೇ ವಿಭಾಗಕ್ಕೆ(SWR) ಸೇರ್ಪಡೆಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಹಲವು ಸುಧಾರಣಾ ಕ್ರಮಗಳು ನಿಲ್ದಾಣದಲ್ಲಿ ಜಾರಿಯಾಗುತ್ತಿವೆ.
ಇದನ್ನೂ ಓದಿ: ರೈಲ್ವೆ ಹಳಿ ಮೇಲಿನ ಅಸಹಜ ಸಾವು ಪ್ರಕರಣಗಳ ದಾಖಲಿಸಲು ಪೊಲೀಸರಿಂದ ಆ್ಯಪ್ ಬಳಕೆ!
ಈ ಬಗ್ಗೆ ಮಾತನಾಡಿದ SWR ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ತಮ್ಮ ಮೊದಲ ಆದ್ಯತೆ ಪ್ರಯಾಣಿಕರಿಗೆ ಅನುಕೂಲವಾಗುವ ಸೌಕರ್ಯ ಕಲ್ಪಿಸಿಕೊಡುವುದು ಎಂದಿದ್ದಾರೆ.
ಇದನ್ನೂ ಓದಿ: ಭಾರತೀಯ ರೈಲ್ವೇಸ್ ತೀವ್ರ ನಷ್ಟದಲ್ಲಿರುವುದು ಸಿಎಜಿ ವರದಿಯಿಂದ ಬಹಿರಂಗ: ರೈಲ್ವೇಸ್ ಲಾಭದಲ್ಲಿದೆ ಎಂದಿದ್ದ ಕೇಂದ್ರ ಸರ್ಕಾರ
ಈಗಾಗಲೇ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಒಟ್ಟು 4 ಪ್ಲ್ಯಾಟ್ ಫಾರ್ಮುಗಳಿವೆ. ಈಗ ಹೆಚ್ಚುವರಿ ಎರಡು ಪ್ಲಾಟ್ ಫಾರ್ಮುಗಳನ್ನು ನಿರ್ಮಿಸಲಾಗುವುದು. ಇಲ್ಲಿನ ಪ್ರಯಾಣಿಕರು ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ವಾಹನ ಪಾರ್ಕಿಂಗ್ ಗಾಗಿ ಪ್ರಯಾಣಿಕರು ದೂರ ಪ್ರಯಾಣಿಸಬೇಕಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಇದನ್ನೂ ಓದಿ: ಬಿಹಾರ: ನಕಲಿ ದಾಖಲೆ ಸೃಷ್ಟಿಸಿ ರೈಲ್ವೆ ಇಂಜಿನ್ ಮಾರಿದ ಇಂಜಿನಿಯರ್