Karnataka news paper

ಕಪ್ಪು ಬಣ್ಣವೆಂದರೆ ನನಗಿಷ್ಟ: ಐಂದ್ರಿತಾ ರೇ ಪೋಸ್ಟ್ ವೈರಲ್


ಬೆಂಗಳೂರು: ನಟಿ ಐಂದ್ರಿತಾ ರೇ ಅವರಿಗೆ ಕಪ್ಪು ಬಣ್ಣವೆಂದರೆ ಇಷ್ಟವಂತೆ.. ಹಾಗಾಗಿ ಇನ್‌ಸ್ಟಾಗ್ರಾಂನಲ್ಲಿ ಕಪ್ಪು ಬಿಳುಪಿನ ಫೋಟೊಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳನ್ನು ನಿಮಿಷ್ ಜೈನ್ ಸೆರೆಹಿಡಿದಿದ್ದಾರೆ.

ಐಂದ್ರಿತಾ ರೇ ಮೆರವಣಿಗೆ ಚಿತ್ರದ ಮೂಲಕ 2007ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಬಳಿಕ ಹಲವಾರು ಚಿತ್ರಗಳಲ್ಲಿ ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮನಸಾರೆ ಚಿತ್ರದಲ್ಲಿ ಅವರು ಮಾಡಿದ್ದ ದೇವಿಕಾ ಎಂಬ ಮಾನಸಿಕ ಅಸ್ವಸ್ಥೆಯ ಪಾತ್ರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು..

2018ರಲ್ಲಿ ದಿಗಂತ್ ಅವರನ್ನು ಮದುವೆಯಾಗಿರುವ ಐಂದ್ರಿತಾ ರೇ, ಬಿ. ಆರ್. ಅಂಬೇಡ್ಕರ್ ದಂತ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವಾಗಲೇ ಮಾಡೆಲಿಂಗ್ ಮತ್ತು ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಮದುವೆ ಬಳಿಕ ದಿಗಂತ್ ಜತೆ ಪ್ರವಾಸ, ಟ್ರೆಕ್ಕಿಂಗ್ ಎಂದು ವಿವಿಧ ತಾಣಗಳಿಗೆ ಐಂದ್ರಿತಾ ಭೇಟಿ ನೀಡುತ್ತಿರುತ್ತಾರೆ.





Read More…Source link