Karnataka news paper

ಗೆಳೆಯ ಅನುಗ್ರಹ್ ತಿವಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಯಂತನಿ ಘೋಷ್


ಬೆಂಗಳೂರು: ಟಿವಿ ನಟಿ ಸಯಂತನಿ ಘೋಷ್ ಅವರ ಬಹುಕಾಲದ ಗೆಳೆಯ ಅನುಗ್ರಹ್ ತಿವಾರಿ ಜತೆ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ಸಮಾರಂಭದ ಫೋಟೊಗಳನ್ನು ಸಯಂತನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರೂ ಜತೆಯಾಗಿ ಸಾಗಲು, ಈ ದಿನವನ್ನು ಮುನ್ನುಡಿಯಾಗಿಸಿಕೊಂಡಿದ್ದೇವೆ. ನಮ್ಮ ಹೊಸ ಪಯಣ ಆರಂಭವಾಗುತ್ತಿದೆ ಎಂದು ಸಯಂತನಿ ಹೇಳಿಕೊಂಡಿದ್ದಾರೆ.

ಅನುಗ್ರಹ್ ಮತ್ತು ಸಯಂತನಿ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ಕುಟುಂಬದ ಆಪ್ತರು ಮತ್ತು ಗೆಳೆಯರ ಸಮ್ಮುಖದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ..

ನಾಗಿನ್ 4 ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಸಯಂತನಿ ಜನಪ್ರಿಯ ನಟಿಯೂ ಆಗಿದ್ದಾರೆ.





Read More…Source link