ಹೈಲೈಟ್ಸ್:
- ಚೀನಾದಿಂದ ಅಗ್ಗದ ದರದ ಉತ್ಪನ್ನಗಳ ರಫ್ತು
- ಚೀನಾದ ಐದು ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಿದ ಕೇಂದ್ರ
- ಅಲ್ಯೂಮಿನಿಯಂ, ಸೋಡಿಯಂ ಹೈಡ್ರೋಸಲ್ಫೈಟ್ ಸಿಲಿಕಾನ್ ಮೊದಲಾದ ವಸ್ತುಗಳ ಮೇಲೆ ಸುರಿ ತೆರಿಗೆ
ಇದರಿಂದ ಸ್ಥಳೀಯ ಉದ್ಯಮಗಳು ನೆಲಕಚ್ಚಿದ್ದವು. ಇದರ ಪರಿಣಾಮ ಅರಿತ ಕೇಂದ್ರ ಸರಕಾರ, ಚೀನಾದ ಈ ಐದು ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಸುರಿ ತೆರಿಗೆ ವಿಧಿಸಿ ಆದೇಶ ಹೊರಡಿಸಿದೆ. ಐದು ವರ್ಷಗಳ ಅವಧಿಗೆ ಈ ತೆರಿಗೆ ಜಾರಿ ಇರುತ್ತದೆ. ವಾಣಿಜ್ಯ ಮಹಾ ನಿರ್ದೇಶನಾಲಯದ ಶಿಫಾರಸಿನ ಮೇರೆಗೆ ಸರಕಾರ ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
2017ರಲ್ಲಿ ಚೀನಾ ಟೆಂಪರ್ಡ್ ಗ್ಲಾಸ್ ಮೇಲೆ ಆಂಟಿ ಡಂಪಿಂಗ್ ತೆರಿಗೆ
ಮೊಬೈಲ್ ಫೋನ್‌ಗಳ ಪರದೆ ರಕ್ಷಣೆಗೆ ಬಳಸುವ ಚೀನಾ ನಿರ್ಮಿತ ಟೆಂಪರ್ಡ್ ಗ್ಲಾಸ್‌ಗಳ ಆಮದಿನ ಮೇಲೆ ಭಾರತ 2017ರಲ್ಲೇ ಸುರಿ ವಿರೋಧಿ (ಆ್ಯಂಟಿ ಡಂಪಿಂಗ್) ತೆರಿಗೆ ಹೇರಿತ್ತು. ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಆಮದಾಗುವ ಚೀನಾದ ಅಗ್ಗದ ವಸ್ತುಗಳಿಂದ ದೇಶೀಯ ಉದ್ಯಮವನ್ನು ರಕ್ಷಿಸಲು ಸರಕಾರ ಈ ಕ್ರಮ ಕೈಗೊಂಡಿತ್ತು. ಚೀನಾದಿಂದ ಆಮದಾಗುವ ಪ್ರತಿ ಟನ್ ಟೆಂಪರ್ಡ್ ಗ್ಲಾಸ್‌ಗಳ ಮೇಲೆ 52.85 ಡಾಲರ್‌ನಿಂದ 136.21 ಡಾಲರ್ ವರೆಗೂ ಆ್ಯಂಟಿ ಡಂಪಿಂಗ್ ಶುಲ್ಕ ವಿಧಿಸಿತ್ತು.
ಚೀನಾ ರೇಷ್ಮೆ ಪೂರೈಗೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ವಾರಣಾಸಿಗೆ ರೇಷ್ಮೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ. ಈ ಕುರಿತಾಗಿ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ. ಈ ಸಂಬಂಧ ಬುಧವಾರ ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ವಾರಣಾಸಿಗೆ ತೆರಳಲಿದೆ.