
ಸ್ಮೃತಿ ಇರಾನಿ
Online Desk
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್ ಮೀಡಿಯಾಗಳಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಶಾನೆಲ್ ಇರಾನಿ ನಿಶ್ಚಿತಾರ್ಥವಾದ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಮಗಳು ಮತ್ತು ಬಾವಿ ಅಳಿಯನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಅರ್ಜುನ್ ಅವರು ಶಾನೆಲ್ಗೆ ಪ್ರಪೋಸ್ ಮಾಡುತ್ತಿರುವದು. ಎರಡನೇ ಫೋಟೋ, ಇವರಿಬ್ಬರೂ ಪ್ರೀತಿಯಿಂದ ಮುಖಕ್ಕೆ-ಮುಖ ತಾಗಿಸಿ ನಗುತ್ತ ನಿಂತಿರುವುದನ್ನು ನೋಡಬಹುದು.
ಇದರ ಜೊತೆಗೆ ಸ್ಮೃತಿ ಇರಾನಿ ಎಂದಿನಿಂತೆ ಫನ್ನಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅರ್ಜುನ್ ಭಲ್ಲಾ ನಮ್ಮ ಹೃದಯವನ್ನು ಗೆದ್ದ ವ್ಯಕ್ತಿ. ಅವರಿಗೆ ನಮ್ಮ ಕ್ರೇಜಿ ಕುಟುಂಬಕ್ಕೆ ಸ್ವಾಗತ. ಹಾಗೇ, ನೀವು ಇನ್ನು ಮುಂದೆ ನಮ್ಮ ಹುಚ್ಚುತನವನ್ನೆಲ್ಲ ಸಹಿಸಿಕೊಳ್ಳಬೇಕು ಎಂದು ಅರ್ಜುನ್ಗೆ ಪ್ರೀತಿಯಿಂದ ಎಚ್ಚರಿಕೆಯನ್ನೂ ನೀಡಿದ್ದಾರೆ. ಶಾನೆಲ್ ಇರಾನಿ, ಸ್ಮೃತಿ ಅವರ ಸ್ವಂತ ಮಗಳಲ್ಲ, ಪತಿ ಜುಬಿನ್ ಇರಾನಿ ಅವರ ಮೊದಲ ಪತ್ನಿಯ ಮಗಳು.