Karnataka news paper

ಆಲಿಯಾ ಭಟ್ ಎಂದರೆ ನನಗೂ ಅಚ್ಚುಮೆಚ್ಚು: ಅಮಿತಾಭ್ ಬಚ್ಚನ್


ಬೆಂಗಳೂರು: ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಕೆಲವೊಂದು ಆಸಕ್ತಿದಾಯಕ ಸಂಗತಿಗಳು ತೆರೆದುಕೊಳ್ಳುತ್ತವೆ.

ಅಮಿತಾಭ್ ಅವರು ಸ್ಪರ್ಧಿಗಳ ಜತೆ ಪ್ರಶ್ನೆ ಕೇಳುವ ಜತೆಗೆ ಸಾಮಾನ್ಯ ಸಂಗತಿಗಳ ಕುರಿತು ಮಾತಿಗೆ ಎಳೆಯುತ್ತಾರೆ.

ಕೌನ್ ಬನೇಗಾ ಕರೋಡ್‌ಪತಿ ಸೀಸನ್ 13ರಲ್ಲಿ ಅಮಿತಾಭ್, ಸ್ಪರ್ಧಿಯೊಬ್ಬರ ಜತೆ ಮಾತನಾಡುತ್ತಾ ನನಗೆ ಆಲಿಯಾ ಭಟ್ ಎಂದರೆ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ಹೆಂಡತಿ ಪಕ್ಕದಲ್ಲಿ ಇಲ್ಲದೇ ಇರುವುದರಿಂದ ನಾನು ಈಗ ಸ್ವತಂತ್ರವಾಗಿ ಮಾತನಾಡಬಹುದು ಎಂದು ಹಾಸ್ಯಚಟಾಕಿ ಹಾರಿಸಿದ್ದರೆ.

ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧಿ ಮನೋಜ್ ಎಂಬವರು ಶೋದಲ್ಲಿ ನಟಿಯರ ಪೈಕಿ ನನಗೆ ಆಲಿಯಾ ಭಟ್ ಎಂದರೆ ಇಷ್ಟ ಎಂದಿದ್ದಾರೆ.

ಅದನ್ನು ಕೇಳಿದ ಅಮಿತಾಭ್ ಅವರು, ನನಗೆ ಆಲಿಯಾ ಭಟ್ ಎಂದರೆ ಇಷ್ಟ ಎಂದು ತಿಳಿಸಿದ್ದಾರೆ.



Read More…Source link